ಯೂಕ್ಲಿಡ್ 1 - 
ಕ್ರಿ.ಪೂ. 5ನೆಯ ಶತಮಾನದ ಗ್ರೀಕ್ ತತ್ತ್ವe್ಞÁನಿ. ಹುಟ್ಟಿದ್ದು ಮೆಗರದಲ್ಲಿ. ಈತ ಸಾಕ್ರಟೀಸನ ಅಚ್ಚುಮೆಚ್ಚಿನ ಶಿಷ್ಯನಾಗಿದ್ದು, ಆತನ ಕೊನೆಯ ಸಂವಾದವನ್ನು ಕೇಳಿದವರಲ್ಲಿ ಒಬ್ಬ ಎನ್ನಲಾಗಿದೆ. ಸಾಕ್ರಟೀಸನ ಮರಣಾನಂತರ ಈತ ಅಥೆನ್ಸ್ ನಗರ ಬಿಟ್ಟು ಜನ್ಮಸ್ಥಳವಾದ ಮೆಗರದಲ್ಲಿ ಬಂದು ನೆಲಸಿದ. ಪ್ರಾಯಶಃ ಪ್ಲೇಟೋ ಕೂಡ ಮೆಗರದಲ್ಲಿ ಬಂದು ನೆಲಸಿದ್ದಿರಬಹುದೆಂಬ ಊಹೆಯೂ ಇದೆ. 
ಯೂಕ್ಲಿಡ್ ದರ್ಶನಪಂಥಕ್ಕೆ ಮೆರಗುಪಂಥ ಎಂದು ಹೆಸರಾಯಿತು. ಈತ ತನ್ನ ದರ್ಶನದಲ್ಲಿ ಎಲಿಯಾಲಿಕ್‍ರ `ಸತ್ ಅಂದರೆ ಸರ್ವಸ್ತಿತ್ವ ತತ್ತ್ವವೆಂಬ ತತ್ತ್ವಕ್ಕೂ ಮತ್ತು ಸಾಕ್ರಟಿಸ್‍ನ `ಸತ್ ಎಂದರೆ ಸದ್ಧರ್ಮ ಎಂಬ ತತ್ತ್ವಕ್ಕೂ ಸಮನ್ವಯ ಏರ್ಪಡಿಸಿದ. ಈತನ ತತ್ತ್ವದ ಇನ್ನೊಂದು ವೈಶಿಷ್ಟ್ಯವೆಂದರೆ `ಸತ್ ಕೇವಲ ಏಕಪ್ರಕಾರವಾದದ್ದಲ್ಲ. ಬಹುತ್ವವನ್ನು ಒಳಗೊಂಡ ಏಕತ್ವ. ಇದು ಸಚ್ಚಿತ್ತತ್ತ್ವ. ಈ ದೃಷ್ಟಿಯಿಂದ ಯಾವುದೂ ಅಪೂರ್ಣವಲ್ಲ. ಎಲ್ಲವೂ ಪೂರ್ಣಮಯ. ಮೆಗರ ಪಂಥದ ತಿರುಳು ಬಹುತ್ವದಲ್ಲಿ ಅಡಗಿರುವ ಏಕತ್ವ ತತ್ತ್ವವನ್ನು ಸಮರ್ಥಿಸುವುದಾಗಿದೆ. ಪ್ಲೇಟೊವಿನಂತೆ ಯೂಕ್ಲಿಡ್ ಸಹ ಇಂದ್ರಿಯಗಳು ನಮಗೆ ದೊರಕಿಸಿಕೊಡುವ e್ಞÁನ ಕ್ಷಣಭಂಗುರವೂ ಅನಿತ್ಯವೂ ಆದ ವಸ್ತುವಿನ e್ಞÁನವೆಂದೂ ನಿತ್ಯವೂ ಮತ್ತು ಶಾಶ್ವತವೂ ಆದ ಮತಿe್ಞÁನದ ಮೂಲಕ ಮಾತ್ರ ಪಡೆಯಬಹುದಾದುದೆಂದೂ ಪ್ರತಿವಾದಿಸಿದ. ಇವನು ಪತ್ಯಕ್ಷ ಮತ್ತು ಅನುಮಾನ ಪ್ರಮಾಣಗಳನ್ನು ಒಪ್ಪಿಕೊಂಡು ಉಪಮಾನ ಪ್ರಮಾಣವನ್ನು ನಿರಾಕರಿಸಿದ್ದಾನೆ.
 									 (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ